ಮಹಿಳೆಯ ಮೇಲೆ ಗ್ಯಾಂಗ್‌ರೇಪ್: ಬಾಯ್‌ಫ್ರೆಂಡ್ ಅರೆಸ್ಟ್

ಶುಕ್ರವಾರ, 23 ಡಿಸೆಂಬರ್ 2016 (10:31 IST)
ನಗರದ ದ್ವಾರಕಾ ಪ್ರದೇಶದಲ್ಲಿ 21 ವರ್ಷದ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಮಾರ್ಕೆಟಿಂಗ್ ಕಂಪೆನಿಯ  ವ್ಯವಸ್ಥಾಪಕ ಮತ್ತು ಆತನ ಗೆಳೆಯನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
 
ಹರಿಯಾಣಾದ ಗುರುಗ್ರಾಮ ನಿವಾಸಿಯಾದ ಮಹಿಳೆ ಮತ್ತು ಆಕೆಯ ಗೆಳೆಯ ಹಿಮ್ಮತ್ ಎಂಬಾತನನ್ನು ಕಟ್ಟಡದ ಮೇಲಿನಿಂದ ಬಿದ್ದು ಗಾಯಗೊಂಡಿದ್ದರಿಂದ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಸೇರಿಸಲಾಗಿತ್ತು. 
 
ಮಹಿಳೆ ಮತ್ತು ಆಕೆಯ ಗೆಳೆಯನನ್ನು ಆಸ್ಪತ್ರೆಗೆ ದಾಖಲಿಸಿದಾಗ ಇಬ್ಬರು ಮದ್ಯ ಸೇವಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮಹಿಳೆ ಮತ್ತು ಆಕೆಯ ಗೆಳೆಯ ಕಟ್ಟಡ ಮೇಲೆನಿಂದ ಹೇಗೆ ಕೆಳಗೆ ಬಿದ್ದರು. ಸಮ್ಮತಿಯಿಂದಲೇ ರೇಪ್ ನಡೆದಿದೆಯೇ ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಈಗಾಗಲೇ ಪೊಲೀಸ್ ವಶದಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ