ಗುರುಗಳಿಗೆ ಇನ್ಮುಂದೆ ಸರ್, ಮೇಡಂ ಎನ್ನುವಂತಿಲ್ಲ!

ಭಾನುವಾರ, 9 ಜನವರಿ 2022 (16:19 IST)
ತಿರುವನಂತಪುರಂ : ವಿದ್ಯಾರ್ಥಿಗಳು ಲಿಂಗಾನುಸಾರವಾಗಿ ಶಿಕ್ಷಕರನ್ನು ಸರ್, ಮೇಡಂ ಎಂದು ಕರೆಯುತ್ತಿದ್ದರು.

ಆದರೆ ಇನ್ಮುಂದೆ ಕೇರಳದಲ್ಲಿ ಶಿಷ್ಯರು, ಗುರುಗಳನ್ನು ‘Teacher’ ದು ಸಂಬೋಧಿಸುದವುನ್ನು  ಕಡ್ಡಾಯಗೊಳಿಸಲಾಗಿದೆ. ಇನ್ಮುಂದೆ ಲಿಂಗ ಬೇಧವಿಲ್ಲದೆ ವಿದ್ಯಾರ್ಥಿಗಳು Teacher ಎಂದು ಕರೆಯುತ್ತಾರೆ.

ಈ ಧೋರಣೆಯನ್ನು ಜಾರಿಗೆ ತಂದಿರುವ ಕೇರಳದ ಮೊದಲ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾಲಕ್ಕಾಡ್ ಜಿಲ್ಲೆ ಒಲಶ್ಶೇರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ ಪಾತ್ರವಾಗಿದೆ. 

ಸರ್ಕಾರಿ ಕಚೇರಿಗಳಲ್ಲಿ ಸರ್ ಎಂದು ಸಂಬೋಧಿಸುವ ಅಭ್ಯಾಸವನ್ನು ತೊಡೆದು ಹಾಕಲು ಅಭಿಯಾನ ಪ್ರಾರಂಭಿಸಲಾಗಿದೆ. ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂದ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲನ್ ಎಚ್. ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ