ಪೊಲೀಸ್ ಪಡೆಗೆ ತೃತೀಯಲಿಂಗಿ ಸೇರಿಸಲು ಕೇರಳ ಸರ್ಕಾರ !
ತೃತೀಯ ಲಿಂಗಿಗಳನ್ನು ರಾಜ್ಯ ಪೊಲೀಸ್ ಪಡೆಗೆ ಸೇರಿಸಿಕೊಳ್ಳಲು ಕೇರಳ ಸರ್ಕಾರ ಚಿಂತನೆ ನಡೆಸಿದೆ. ಕೇರಳ ಪೊಲೀಸ್ ಅಧಿಕಾರಿಗಳ ಸಂಘ ತೃತೀಯಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸುವ ಕ್ರಮವನ್ನು ಬೆಂಬಲಿಸುತ್ತಿರುವುದು ಗಮನಾರ್ಹ.
ಮಹಿಳೆಯರನ್ನು ಶೇಕಡಾವಾರು ನೇಮಕಾತಿ ಮಾಡಲಾಗುತ್ತದೆ. ಆದರೆ ಈ ಕಾನೂನು ಸರಿಯಲ್ಲ. ತೃತೀಯಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸಿಕೊಳ್ಳುವ ನಿರ್ಧಾರದಿಂದ ಲಿಂಗ ಭೇದ ಕಡಿಮೆಯಾಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್. ಬಿಜು ತಿಳಿಸಿದರು.