ನವದೆಹಲಿ : ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸತತ ಎರಡನೇ ದಿನವೂ ಇಂದು ವಿಚಾರಣೆ ನಡೆಸಲಿದೆ.
ರಾಹುಲ್ ಬೆಳಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯ ಕಚೇರಿಗೆ ತಲುಪಲಿದ್ದಾರೆ. ಹೀಗಿರುವಾಗ, ಈ ವಿಷಯದಲ್ಲಿ ಈಗ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಷ್ಟಕ್ಕೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮೋದಿ ಸರ್ಕಾರ ಅಥವಾ ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವುದು ಏಕೆ?, ಇಡಿ ಮೂಲಕ ಸಾರ್ವಜನಿಕ ಸಮಸ್ಯೆ ಬಗ್ಗೆ ಎತ್ತಿರುವ ಧ್ವನಿಯನ್ನು ಹತ್ತಿಕ್ಕುವ ಪಿತೂರಿಯೇ? ರಾಹುಲ್ ಗಾಂಧಿ ಮೇಲೆ ಮಾತ್ರ ಯಾಕೆ ಇಷ್ಟೊಂದು ದಾಳಿ ಏಕೆ? ಈ ಪ್ರಶ್ನೆಗಳಿಗೆ ದೇಶಕ್ಕೆ ಉತ್ತರ ತಿಳಿಯಬೇಕಿದೆ ಎಂದಿದ್ದಾರೆ.