45 ವರ್ಷದ ಸೈನಿ ತಮ್ಮ ಸ್ವಕ್ಷೇತ್ರದಿಂದ ಹರ್ಯಾಣ ವಿಧಾನಸಭೆಗೆ ಇನ್ನೂ 10 ಮಂದಿ ಕಾರ್ಯಕರ್ತರ ಜತೆ ಸೈಕಲ್‌ನಲ್ಲಿ ಆಗಮಿಸಿದ್ದರು. ನಾವು ಕುರುಕ್ಷೇತ್ರವನ್ನು ಬೆಳಿಗ್ಗೆ 5.20ಕ್ಕೆ ಬಿಟ್ಟು ಚಂದೀಗಢವನ್ನು ಮಧ್ಯಾಹ್ನ 1.45ಕ್ಕೆ ತಲುಪಿ ಸುಮಾರು 110 ಕಿಮೀ ಸೈಕ್ಲಿಂಗ್ ಮಾಡಿದೆವು. ವಿಧಾನಸಭೆ ಸಮೀಪ ಬಂದಾಗ ಭದ್ರತಾ ಅಧಿಕಾರಿಗಳು ಒಳಬಿಡಲಿಲ್ಲ. ಆದರೆ ಶಾಸಕರೆಂದು ತಿಳಿದ ಬಳಿಕ ತಮ್ಮನ್ನು ಒಳಬಿಟ್ಟಿದ್ದಾಗಿಯೂ ಉಳಿದ ಪಕ್ಷದ ಕಾರ್ಯಕರ್ತರಿಗೆ ಅಸೆಂಬ್ಲಿ ಗೇಟ್ ತನಕ ಜತೆಗೂಡಲು ನಾನು ಅನುಮತಿ ಪಡೆದಿದ್ದಾಗಿ ಸೈನಿ ಹೇಳಿದರು.