ಹರಿಯಾಣ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಪತಿಯನ್ನೇ ಮುಗಿಸಿದ ಪತ್ನಿ

Sampriya

ಬುಧವಾರ, 16 ಏಪ್ರಿಲ್ 2025 (10:43 IST)
Photo Credit X
ಭಿವಾನಿ: ಹರಿಯಾಣದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಮಾರ್ಚ್‌ನಲ್ಲಿ ಈ ಘಟನೆ ಸಂಭವಿಸಿದ್ದು. ಯೂಟ್ಯೂಬರ್ ಆಗಿರುವ ರವೀನಾ ಎಂಬಾಕೆ ಮೇಲೆ ಪತಿಯನ್ನು ಕೊಂದ ಆರೋಪ ಕೇಳಿಬಂದಿದೆ.  ಅಕ್ರಮ ಸಂಬಂಧದ ಹಿನ್ನೆಲೆ ಈ ಹತ್ಯೆ ನಡೆದಿದೆ.

ಆಕೆ ಪ್ರಿಯಕರನೊಂದಿಗೆ ಸೇರಿ ಪತಿ ಪ್ರವೀಣ್‌ ನನ್ನ ಹತ್ಯೆಗೈದು ಶವವನ್ನು ತಮ್ಮ ಬೈಕ್‌ನಲ್ಲಿ ಸಾಗಿಸಿ ನಗರದ ಹೊರಗಿನ ಚರಂಡಿಗೆ ಎಸೆದಿದ್ದರು.

ಬಂಧನಕ್ಕೊಳಗಾಗಿರುವ ರವೀನಾ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೋಗಳು ಮತ್ತು ರೀಲ್‌ಗಳ ಕುರಿತು ಆಕ್ಷೇಪ ಎತ್ತಿದಾಗ ಮದ್ಯವ್ಯಸನಿಯಾಗಿದ್ದ ಪ್ರವೀಣ್ ಜತೆ ಆಗಾಗ್ಗೆ ಜಗಳವಾಡುತ್ತಿದ್ದಳು. 2017 ರಲ್ಲಿ ದಂಪತಿಗೆ ವಿವಾಹವಾಗಿದ್ದು ಮುಕುಲ್ ಎಂಬ ಆರು ವರ್ಷದ ಮಗನಿದ್ದಾನೆ.

ಎರಡು ವರ್ಷಗಳ ಹಿಂದೆ, ರವೀನಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಿಸಾರ್‌ನ ಯೂಟ್ಯೂಬರ್ ಸುರೇಶ್ ಅವರೊಂದಿಗೆ ಸ್ನೇಹವಾಗಿದ್ದು ಕಾಲಾನಂತರ ಇಬ್ಬರು ಸಂಬಂಧ ಬೆಳೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಪ್ರವೀಣ್ ಮನೆಗೆ ಬಂದ ವೇಳೆ ರವೀನಾ ಮತ್ತು ಸುರೇಶ್ ಆಕ್ಷೇಪಾರ್ಹ ಭಂಗಿಯಲ್ಲಿ ಇರುವುದನ್ನು ನಾನು ನೋಡಿದ ಬಳಿಕ ಜಗಳವಾಗಿದ್ದು ಅಂದು ರಾತ್ರಿ ಕತ್ತು ಹಿಸುಕಿ ಹತ್ಯೆ ನಡೆಸಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ