ಹಿಂದೂಗಳೇ 10 ಮಕ್ಕಳನ್ನು ಹಡೆಯಿರಿ, ದೇವರು ನೋಡಿಕೊಳ್ಳುತ್ತಾನೆ

ಸೋಮವಾರ, 26 ಡಿಸೆಂಬರ್ 2016 (11:00 IST)
ಪ್ರತಿ ಹಿಂದೂಗಳ ಮನೆಯಲ್ಲಿ ಹತ್ತತ್ತು ಮಕ್ಕಳಿರಲಿ, ಅವರನ್ನು ದೇವರು ನೋಡಿಕೊಳ್ಳುತ್ತಾನೆ ಎಂದು ವಸುದೇವಾನಂದ ಸರಸ್ವತಿ ಸ್ವಾಮೀಜಿಗಳು ಕರೆ ನೀಡಿದ್ದಾರೆ. 

ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಮೂರು ದಿನಗಳ ಧರ್ಮ ಸಂಸ್ಕೃತಿ ಮಹಾಕುಂಭದ ಅಂತಿಮ ದಿನ ಮಾತನಾಡುತ್ತಿದ್ದ ಅವರು, ಹಿಂದೂಗಳ ಜನಸಂಖ್ಯೆ ಕುಗ್ಗುತ್ತಿದ್ದರೆ, ಇತರ ಧರ್ಮೀಯರಲ್ಲಿ ಹೆಚ್ಚುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದರು. 
 
ಅನ್ಯ ಸಮುದಾಯದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂದ ಅವರು ಹಿಂದೂಗಳು ಹತ್ತತ್ತು ಮಕ್ಕಳನ್ನು ಹಡೆಯಬೇಕು. ಅವರನ್ನು ದೇವರು ನೋಡಿಕೊಳ್ಳುತ್ತಾನೆ. ಈ ಮೂಲಕ ನಮ್ಮ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಸಬೇಕು ಎಂದರು.
 
ಮೂರು ದಿನಗಳ ಈ ಕಾರ್ಯಕ್ರಮ ಭಾನುವಾರ " ಸೇವ್ ಹಿಂದೂ" ಕರೆಯೊಂದಿಗೆ ಕೊನೆಗೊಂಡಿತು. 
 
ವಿಪರ್ಯಾಸವೆಂದರೆ ಇದೇ ವೇದಿಕೆಯಲ್ಲಿ ದೇಶದ ಜನಸಂಖ್ಯೆ ನಿಯಂತ್ರಣವಾಗಬೇಕು ಎಂಬ ಕೂಗು ಸಹ ಕೇಳಿ ಬಂತು.
 
ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್, ವಿಶ್ವ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ಭಾಯ್ ತೊಗಾಡಿಯಾ ಸಹ ಈ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ