ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿಯಲ್ಲ, ದೇಶದ ಪ್ರಧಾನಿ: ಮೋದಿಯನ್ನೂ ಬಿಡದ ಹೈಕೋರ್ಟ್

ಶನಿವಾರ, 26 ಆಗಸ್ಟ್ 2017 (17:47 IST)
ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್‌ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ನಂತರ ನಡೆದ ಹಿಂಸಾಚಾರಕ್ಕೆ ಹರಿಯಾಣಾ ಮತ್ತು ಕೇಂದ್ರ ಸರಕಾರ ಹೊಣೆಯಾಗಿದೆ. ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿಯಲ್ಲ ದೇಶದ ಪ್ರಧಾನಿಯಾಗಿದ್ದಾರೆ ಎಂದು ಪಂಜಾಬ್ ಮತ್ತು ಹರಿಯಾಣಾ ಹೈಕೋರ್ಟ್ ಕಿಡಿಕಾರಿದೆ.
ನಿನ್ನೆ ನಡೆದ ಹಿಂಸಾಚಾರ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಕೋರ್ಟ್‌ ಕಲಾಪದಲ್ಲಿ ಭಾಗಿಯಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ನೀಡಿದ ಹೇಳಿಕೆಯಿಂದ ಕೆಂಡಾಮಂಡಲವಾದ ಕೋರ್ಟ್, ಹರಿಯಾಣಾ ಭಾರತದ ಒಂದು ಭಾಗವಲ್ಲವೇ? ಪಂಜಾಬ್ ಮತ್ತು ಹರಿಯಾಣಾವನ್ನು ಕೇಂದ್ರ ಸರಕಾರ ಯಾಕೆ ಮಲತಾಯಿ ಮಕ್ಕಳಂತೆ ನೋಟಿಕೊಳ್ಳುತ್ತಿದೆ ಎಂದು ಪ್ರಶ್ನಿಸಿತು.   
 
ಇದಕ್ಕೂ ಮೊದಲು, ಹರಿಯಾಣಾ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಕೇವಲ ರಾಜಕೀಯ ಲಾಭಕ್ಕಾಗಿ ಪಂಚಕುಲಾ ನಗರವನ್ನು ಸುಟ್ಟು ಭಸ್ಮವಾಗಲು ಕಾರಣವಾಗಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿತು.  
 
ರಾಮ್ ರಹೀಮ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದ ಕೂಡಲೇ ಅವರ ಬೆಂಬಲಿಗರು ಹಲವಾರು ವಾಹನಗಳು, ಆಸ್ತಿಗಳಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿ 35ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ