ಮದ್ಯ ಸೇವಿಸಲು ಆಫೀಸ್‍ನಲ್ಲಿದ್ದ ಆಸ್ತಿಯನ್ನೆಲ್ಲಾ ಮಾರಾಟ ಮಾಡ್ದ!
ಗಂಜಾಂ ಜಿಲ್ಲಾ ಶಿಕ್ಷಣ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೀತಾಂಬರಂ ಎಂಬಾತ ಎರಡು ವರ್ಷಗಳಿಂದ ತನ್ನ ಮದ್ಯದ ವೆಚ್ಚ ಭರಿಸಲು ಸ್ಕ್ರ್ಯಾಪ್ ಅಂಗಡಿಗೆ ಕಟ್ಟಡದ ಬಾಗಿಲುಗಳು ಮತ್ತು ಕಿಟಕಿಗಳು ಹೀಗೆ ಹಲವಾರು ವಸ್ತುಗಳನ್ನು ಮಾರಾಟ ಮಾಡಿತ್ತಿದ್ದನು.
ಆಶ್ಚರ್ಯವೆಂದರೆ ಎರಡು ವರ್ಷಗಳಿಂದಲೂ ಇಷ್ಟೆಲ್ಲಾ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದರೂ, ಯಾರ ಗಮನಕ್ಕೂ ಈ ವಿಚಾರ ತಿಳಿದುಬಂದಿರಲಿಲ್ಲ. ಆದರೆ ಇತ್ತೀಚೆಗೆ ಕಚೇರಿಯನ್ನು ಸ್ಥಳಾಂತರಗೊಳಿಸುವ ವೇಳೆ ಸತ್ಯ ತಿಳಿದುಬಂದಿದ್ದು, ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.