ಬಿಹಾರದಲ್ಲಿ ಸುರಿದ ಭಾರೀ ಮಳೆ, ಸಿಡಿಲು ಬಡಿದು 33 ಮಂದಿ ಸಾವು, ಹಲವರಿಗೆ ಗಾಯ

Sampriya

ಶುಕ್ರವಾರ, 18 ಜುಲೈ 2025 (17:01 IST)
Photo Credit X
ಪಾಟ್ನಾ: ಹವಾಮಾನ ಇಲಾಖೆ ಮುನ್ಸೂಚಯಂತೆ ಈ ವಾರ ಬಿಹಾರದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದೀಗ ಸಿಕ್ಕಿರುವ  ಮಾಹಿತಿ ಪ್ರಕಾರ ಸಿಡಿಲು ಬಡಿದು ಕನಿಷ್ಠ 33 ಜನ ಸಾವನ್ನಪ್ಪಿದ್ದಾರೆ  ಎಂದು ತಿಳಿದುಬಂದಿದೆ. ಇನ್ನೂ ಘಟನೆಯಲ್ಲಿ ಹಲವಾರು ಮಂದಿ   ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬಿಹಾರದಲ್ಲಿ ಬುಧವಾರ ಮತ್ತು ಗುರುವಾರದ ನಡುವೆ ಬಿರುಗಾಳಿ ಸಹಿತ ಭೀಕರ ಮಳೆಯಲ್ಲಿ ಈ ಸಾವುಗಳು ಸಂಭವಿಸಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಸಿಡಿಲು ಬಡಿದು ಮೃತಪಟ್ಟವರಲ್ಲಿ ಹೆಚ್ಚಿನವರು ರೈತರು ಮತ್ತು ಕಾರ್ಮಿಕರಾಗಿದ್ದ, ರಾಜ್ಯದ ಕೆಲವು ಭಾಗಗಳಲ್ಲಿ ಭಾರಿ ಮಳೆ ಮತ್ತು ಮಿಂಚಿನ ಮುನ್ಸೂಚನೆ ನೀಡಲಾಗಿದೆ.

ಸಿಡಿಲಿನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಒಟ್ಟು 4 ಮಿಲಿಯನ್ ರೂಪಾಯಿ($4,600) ಪರಿಹಾರ ಘೋಷಿಸಿದೆ.

2024 ರಲ್ಲಿ ಕನಿಷ್ಠ 243 ಜನ ಸಿಡಿಲಿನಿಂದ ಸಾವನ್ನಪ್ಪಿದ್ದರು ಮತ್ತು ಅದರ ಹಿಂದಿನ ವರ್ಷ 275 ಜನ ಸಾವನ್ನಪ್ಪಿದರು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ