ಭಾರೀ ಮಳೆಗೆ ದೆಹಲಿ ತತ್ತರ ! 5ನೇ ತರಗತಿವರೆಗಿನ ಶಾಲೆಗಳಿಗೆ ರಜೆ
ಮಂಗಳವಾರ, 11 ಜುಲೈ 2023 (06:23 IST)
ನವದೆಹಲಿ : ಉತ್ತರ ಭಾರತದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಪ್ರಳಯವೇ ಸೃಷ್ಟಿಯಾದಂತಾಗಿದೆ.
ಭಾರೀ ಮಳೆಯ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ನರ್ಸರಿಯಿಂದ 5ನೇ ವರೆಗಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಜುಲೈ 11 ರಂದು ರಜೆ ಘೋಷಿಸಲಾಗಿದೆ.
ದೆಹಲಿ, ಪಂಜಾಬ್, ಉತ್ತರಾಖಂಡ್ನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ದೆಹಲಿಯಲ್ಲಿ ತಡೆಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ವಿವಿಧೆಡೆ 15ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಯಮುನಾ ನದಿ ಸೇರಿದಂತೆ ಹೆಚ್ಚಿನ ನದಿಗಳು ಉಕ್ಕಿ ಹರಿಯುತ್ತಿವೆ.
ಕಳೆದ ಎರಡು ದಿನಗಳಿಂದ ಮಹಳೆ ಬಿಡದೇ ಸುರಿಯುತ್ತಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಖಾಸಗಿ ಶಾಲೆಗಳೂ ಮುಂದಿನ ಆದೇಶದ ವರೆಗೆ ಅದೇ ಕ್ರಮವನ್ನು ಅನುಸರಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ನರ್ಸರಿಯಿಂದ 5ನೇ ತರಗತಿವರೆಗೆ ರಜೆ ನೀಡಿದ್ದು, 6ರಿಂದ ಮೇಲ್ಪಟ್ಟ ತರಗತಿಗಳು ಎಂದಿನಂತೆ ನಡೆಯುತ್ತವೆ.