ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಪ್ರತಿಯೊಂದು ಜಿಲ್ಲೆಗೂ ಮೂರರಿಂದ ನಾಲ್ಕು ಬಾರಿ ಭೇಟಿ ನೀಡಿದ್ದೇನೆ ಎಂದು ಶಿವಪಾಲ್ ಹೇಳಿದಾಗ, ಸರಕಾರಿ ಹೆಲಿಕಾಪ್ಟರ್ ಬಳಸಿಕೊಂಡು ಪ್ರಯಾಣಿಸಿದ್ದೀರಾ ಎನ್ನುವ ಪ್ರತಿಕ್ರಿಯೆ ಸಭಿಕರಿಂದ ಕೇಳಿ ಬಂತು.
ಇದರಿಂದ ಆಕ್ರೋಶಗೊಂಡ ಶಿವಪಾಲ್, ಹೆಲಿಕಾಪ್ಟರ್ ತುಮ್ಹಾರೆ ಬಾಪ್ ಕಾ ಹೈ, ಸರಕಾರ ಮೇ ಮೈ ಮಂತ್ರಿ ಥಾ( ಹೆಲಿಕಾಪ್ಟರ್ ನಿಮ್ಮಪ್ಪಂದಾ, ಸರಕಾರದಲ್ಲಿ ಸಚಿವನಾಗಿದ್ದರಿಂದ ಹೆಲಿಕಾಪ್ಟರ್ ಬಳಸಿದ್ದೇನೆ ಎಂದು ತಿರುಗೇಟು ನೀಡಿದರು.