ಶ್ರೀರಾಮನ ಫೋಟೋ ಇರುವ ಪ್ಲೇಟ್ ನಲ್ಲಿ ಚಿಕನ್ ಬಿರಿಯಾನಿ ವಿತರಣೆ: ಹಿಂದೂಗಳ ಆಕ್ರೋಶ

Krishnaveni K

ಬುಧವಾರ, 24 ಏಪ್ರಿಲ್ 2024 (08:59 IST)
ನವದೆಹಲಿ: ಹಿಂದೂಗಳ ಆರಾಧ‍್ಯ ದೈವ ಪ್ರಭು ಶ್ರೀರಾಮಚಂದ್ರನ್ ಫೋಟೋ ಇರುವ ಪೇಪರ್ ಪ್ಲೇಟ್ ನಲ್ಲಿ ಚಿಕನ್ ಬಿರಿಯಾನಿ ವಿತರಿಸಿದ ವಿಚಾರ ಈಗ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಘಟನೆ ನಡೆದಿದೆ.

ವರ್ತಕರೊಬ್ಬರು ಶ್ರೀರಾಮನ ಫೋಟೋ ಇರುವ ಪ್ಲೇಟ್ ಗಳಲ್ಲಿ ಚಿಕನ್ ಬಿರಿಯಾನಿ ವಿತರಿಸಿದ್ದಾರೆ. ಬಳಸಿ ಬಿಸಾಡುವ ಇಂತಹ ಹಲವು ಪ್ಲೇಟ್ ಗಳನ್ನು ಕಸದ ಬುಟ್ಟಿಯಲ್ಲಿ ಗಮನಿಸಿದ ಸ್ಥಳೀಯರು ಅಂಗಡಿ ಮಾಲಿಕನನ್ನು ಪ್ರಶ್ನೆ ಮಾಡಿದ್ದಾರೆ. ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಬಿರಿಯಾನಿ ಅಂಗಡಿಯಲ್ಲಿ ಇಂತಹ ಹಲವು ಪ್ಲೇಟ್ ಗಳಿತ್ತು. ಕಸದ ಬುಟ್ಟಿಯಲ್ಲೂ ಬಳಸಿ ಬಿಸಾಡಲಾದ ಪ್ಲೇಟ್ ಗಳಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಇಂತಹ ಪ್ಲೇಟ್ ಗಳ ಕಟ್ಟನ್ನು ಅಂಗಡಿಯಿಂದ ವಶಪಡಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆ ಹಿಂದೂಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ಲೇಟ್ ಗಳಲ್ಲಿ ರಾಮನ ಫೋಟೋ ಹಾಕುವ ಅಗತ್ಯವೇನಿತ್ತು. ಅಂತಹ ಪ್ಲೇಟ್ ಗಳಲ್ಲಿ ಮಾಂಸಾಹಾರ ವಿತರಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ