8 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು?

ಶುಕ್ರವಾರ, 10 ನವೆಂಬರ್ 2017 (10:48 IST)
ನವದೆಹಲಿ: ದೇಶದ 8 ರಾಜ್ಯಗಳಲ್ಲಿ ಹಿಂದೂ ಧರ್ಮೀಯರಿಗೆ ಅಲ್ಪಸಂಖ್ಯಾತ ಪಟ್ಟ ನೀಡುವ ಬಗ್ಗೆ ಇಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ.

 
2011 ರ ಜನಗಣತಿಯ ಪ್ರಕಾರ 8 ರಾಜ್ಯಗಳಲ್ಲಿ ಹಿಂದೂಗಳ ಜನಸಂಖ್ಯೆ ತೀರಾ ಕಡಿಮೆಯಾಗಿದೆ. ಮೇಘಾಲಯ,  (11.53%), ಲಕ್ಷದ್ವೀಪ (2.5%),  ಮಿಜೋರಾಂ (2.75%), ನ್ಯಾಗಾಲ್ಯಾಂಡ್ (8.75%), ಜಮ್ಮು ಕಾಶ್ಮೀರ (28.44%), ಅರುಣಾಚಲ ಪ್ರದೇಶ (29%), ಮಣಿಪುರ (31.39%), ಪಂಜಾಬ್ (38.40%) ರಾಜ್ಯಗಳಲ್ಲಿ ಹಿಂದೂ ಜನಗಣತಿ ತೀರಾ ಕಡಿಮೆಯಿದೆ.

ಈ ರಾಜ್ಯಗಳಲ್ಲಿನ ಹಿಂದೂಗಳಿಗೆ ಅಲ್ಪಸಂಖ್ಯಾತರ ಪಟ್ಟ ನೀಡಲು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಅಶ್ವನಿ ಕುಮಾರ್ ಉಪಾಧ್ಯ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ