ನವದೆಹಲಿ : ದೇಶದ ಮುಸ್ಲಿಮರ ಕುರಿತಾಗಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಈಗ ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ಭಯ ಬೇಕಿಲ್ಲ. ಆದರೆ ಅಧಿಪತ್ಯ ಧೋರಣೆಯನ್ನು ಮುಸ್ಲಿಮರು ಬಿಡಬೇಕು ಎಂದು ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಇಂಡಿಯಾ, ಹಿಂದುತ್ವವನ್ನು ಮರೆತ ಸಂದರ್ಭಗಳಲ್ಲೆಲ್ಲಾ ದೇಶ ವಿಭಜನೆಗೊಂಡಿದೆ. ಹಿಂದೂಸ್ಥಾನ ಹಿಂದೂಸ್ಥಾನವಾಗಿಯೇ ಮುಂದುವರೆಯಬೇಕು ಎಂದಿದ್ದಾರೆ.
ದೇಶ ಹಿತ, ಹಿಂದೂಗಳ ಒಳಿತಿಗಾಗಿ ರಾಜಕೀಯದಲ್ಲಿ ನಮ್ಮ ಹಸ್ತಕ್ಷೇಪ ಇರುತ್ತದೆ. ಸ್ವಯಂ ಸೇವಕರ ಬಳಿ ಈಗ ಅಧಿಕಾರ ಸಿಕ್ಕಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.