ಪಂಚ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಮೊದಲ ಬಾರಿಗೆ ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ್ ಸೋನೋವಾಲ್ ತಮ್ಮ ನೂತನ ಸರಕಾರದ ಆಧ್ಯತೆಗಳನ್ನು ಬಹಿರಂಗ ಪಡಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾ ಗಡಿ ರಕ್ಷಣೆ
ಅಕ್ರಮ ಗಡಿ ಒಳನುಸುಳುವಿಕೆ ಸಮಸ್ಯೆ, ಇಂಡೋ-ಬಾಂಗ್ಲಾ ಗಡಿ ರಕ್ಷಣೆ, ಸಣ್ಣ ಪ್ರಮಾಣದ ಚಹಾ ಬೆಳೆಗಾರರ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳು ಸರಕಾರಕ್ಕೆ ಪ್ರಮುಖ ಸವಾಲುಗಳಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸಲು ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸಲಿದೆ ಎಂದು ಸರ್ಬಾನಂದ್ ಸೋನೋವಾಲ್ ಸರಕಾರದ ಆಧ್ಯತೆಗಳನ್ನು ವಿವರಿಸಿದ್ದಾರೆ.
ಕೃತ್ರಿಮವಲ್ಲದ ಭಾರತೀಯ ನಾಗರಿಕರ ಪಟ್ಟಿ
ಕೃತ್ರಿಮವಲ್ಲದ ಭಾರತೀಯ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಹಿಂದೂ ಅಥವಾ ಮುಸ್ಲಿಂ ಕೃತ್ರಿಮವಲ್ಲದ ನಾಗರಿಕರ ಆಸಕ್ತಿ ರಕ್ಷಿಸುವುದು ನಮ್ಮ ಮುಖ್ಯ ಗುರಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜಿಪಿ ಭರ್ಜರಿ ಗೆಲುವಿನ ಕುರಿತು ಮಾತನಾಡಿದ ಸೋನೋವಾಲ್, ಮತದಾರರು ಉತ್ತಮ ಆಡಳಿತ ಬಯಸಿ ಬಿಜಿಪಿಯನ್ನು ಬೆಂಬಲಿಸಿ, ಆಡಳಿತರೂಢ ಕಾಂಗ್ರೆಸ್ ಸರಕಾರವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.