ವಕ್ಫ್ ತಿದ್ದುಪಡಿ ಬಿಲ್ ಗೆ ಇಂಡಿಯಾ ಒಕ್ಕೂಟದ ನಾಯಕರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದು ಸಂವಿಧಾನಬಾಹಿರ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಆಕ್ರೋಶ ವ್ಯಕ್ತಪಡಿಸಿವೆ.
‘ಇಲ್ಲಿರುವ ಓರ್ವ ಅಲ್ಪಸಂಖ್ಯಾತ ಸಮುದಾಯದ ಸಂಸದರು ಈ ಬಿಲ್ ನ್ನು ಅಲ್ಪಸಂಖ್ಯಾತರು ವಿರೋಧಿಸಲಿದ್ದಾರೆ ಎನ್ನುತ್ತಾರೆ. ಏನು ಹೇಳ್ತಿದ್ದೀರಿ ಎನ್ನುವ ಅರಿವು ನಿಮಗಿದೆಯೇ? ಸಂಸತ್ತಿನಲ್ಲಿ ಮಾಡುವ ಕಾನೂನುಗಳು ಇಡೀ ದೇಶಕ್ಕೆ ಅನ್ವಯ. ಅದನ್ನು ಎಲ್ಲರೂ ಪಾಲಿಸಲಬೇಕು. ವಿರೋಧಿಸುತ್ತೇವೆ, ಸಂವಿಧಾನ ಬಾಹಿರ ಎನ್ನುವ ಮೂಲಕ ಏನು ಸಂದೇಶ ಕೊಡಲು ಹೊರಟಿದ್ದೀರಿ’ ಎಂದು ವೀರಾವೇಶದಿಂದ ತಿರುಗೇಟು ನೀಡಿದ್ದಾರೆ.