ಸಲಿಂಗಕಾಮಿಗಳು ರಕ್ತದಾನ : ಸುಪ್ರೀಂನಲ್ಲಿರುವ ಮನವಿ ಏನು?

ಗುರುವಾರ, 16 ಮಾರ್ಚ್ 2023 (11:11 IST)
ರಕ್ತದಾನ ವಿಚಾರ ಕುರಿತಂತೆ, ಮಣಿಪುರದ ಥಂಗ್ಜಮ್ ಸಂತಾ ಸಿಂಗ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, 2021ರ ಮಾ.5ರಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

2017ರ ಮಾರ್ಗಸೂಚಿಯ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಮಾರ್ಗಸೂಚಿಯಲ್ಲಿ ಗುರುತಿಸಲಾಗಿರುವ ಈ ವರ್ಗದ ಜನರನ್ನು ಎಚ್ಐವಿ ಮತ್ತು ಏಡ್ಸ್ನ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ವರ್ಗಕ್ಕೆ ಸೇರಿಸಿರುವುದು ಸಂವಿಧಾನದ 14, 15 ಹಾಗೂ 21ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಲಿಂಗ ಹಾಗೂ ಲೈಂಗಿಕತೆ ಆಧಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ‘ನವತೇಜ್ ಜೋಹರ್’ ಮತ್ತು ‘ನಲ್ಸಾ’ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಈ ಮಾರ್ಗಸೂಚಿಗಳು ಉಲ್ಲಂಘಿಸುತ್ತವೆ ಎಂದು ಹೇಳಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ