ಕೋಲಾರ : ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿಂದು ಮಾಲೂರು ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಹಾಗೂ ರಾಷ್ಟ್ರೋತ್ಥಾನ ಸಮಿತಿಯ ವತಿಯಿಂದ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 2,500 ಯೂನಿಟ್ಗಳಷ್ಟು ರಕ್ತ ಸಂಗ್ರಹ ಮಾಡಲಾಗಿದೆ.
ಸಚಿವರಾದ ಅಶ್ವಥ್ ನಾರಾಯಣ, ಮುನಿರತ್ನ ಹಾಗೂ ಸಂಸದ ಮುನಿಸ್ವಾಮಿ, ಮಾಜಿ ಸಚಿವ ಹೆಚ್.ನಾಗೇಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ರಕ್ತದಾನ ಮಾಡಿದರು.
ಇದೇ ವೇಳೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ ಅವರು, ಸುಮಾರು 2,500 ಸಾವಿರ ಯುನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಇಡೀ ಭಾರತದಲ್ಲೇ ಅತಿಹೆಚ್ಚು ರಕ್ತದಾನ ಮಾಡಿದ ಶಿಬಿರ ಎನ್ನುವ ಖ್ಯಾತಿ ಮಾಲೂರು ರಕ್ತದಾನ ಶಿಬಿರ ಪಡೆದಿದೆ.
ಕಳೆದ ವರ್ಷ ಮೋದಿ ಹುಟ್ಟುಹಬ್ಬದಲ್ಲಿ ಸುಮಾರು 1,500 ಯುನಿಟ್ಗಳ ರಕ್ತ ಸಂಗ್ರಹ ಮಾಡಲಾಗಿತ್ತು. ಈಬಾರಿ 2,500 ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ದಾಖಲೆ ಬರೆದಿದೆ.