ವಿಚಿತ್ರ ಪ್ರೇಮಕಥೆಯಲ್ಲಿ ಹೀಗಾ ಹೆಣ ಬೀಳೋದು?

ಶನಿವಾರ, 10 ಅಕ್ಟೋಬರ್ 2020 (18:30 IST)
ಲವ್ ಕಹಾನಿಯೊಂದರಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ.

ಮಗನೊಬ್ಬ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದನು. ಲವ್ ಮಾಡಿದ್ದ  ಹುಡುಗಿಯನ್ನು ವಿರೋಧದ ನಡುವೆಯೇ ಮದುವೆಯಾಗಿದ್ದಾನೆ.

ಆದರೆ ಮಗ ಮದುವೆಯಾಗಿರುವುದಕ್ಕೆ ಆತನ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಉತ್ತರ ಪ್ರದೇಶದ ಬುಲಂದರಶಹರ್ ನಲ್ಲಿ ಈ ಘಟನೆ ನಡೆದಿದ್ದು, ಅಂತರ್ಜಾತಿ ವಿವಾಹದಿಂದಾಗಿ ಯುವತಿ ಕಡೆಯವರು ಈ ಕೊಲೆ ಮಾಡಿಸಿದ್ದಾರೆ ಎಂದು ಯುವಕನ ಮನೆ ಮಂದಿ ಆರೋಪಿಸಿದ್ದಾರೆ.

ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ