ಕೇರಳ ಚುನಾವಣೆ ಗೆಲ್ಲುವುದು ರಾಹುಲ್ ಗಾಂಧಿಗೆ ಮಹತ್ವ ಯಾಕೆ?

ಸೋಮವಾರ, 22 ಮಾರ್ಚ್ 2021 (09:03 IST)
ತಿರುವನಂತಪುರಂ: ಕೇರಳದಲ್ಲಿ ಏಪ್ರಿಲ್ 6 ರಂದು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆ ಕಾಂಗ್ರೆಸ್ ಗಿಂತ ರಾಹುಲ್ ಗಾಂಧಿ ಪಾಲಿಗೆ ಮಹತ್ವದ್ದು.


ಪ್ರತೀ ಬಾರಿಯೂ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಥವಾ ಎಡರಂಗ ಎಲ್ ಡಿಎಫ್ ನೇತೃತ್ವದ ಪಕ್ಷ  ಒಂದಾದ ಮೇಲೆ ಒಂದರಂತೆ ಅಧಿಕಾರಕ್ಕೇರುತ್ತದೆ. ಆದರೆ ಈ ಬಾರಿ ಕಮ್ಯನಿಷ್ಟ್ ಪಕ್ಷಕ್ಕೆ ಸಿಎಂ ಪಿಣರಾಯಿ ವಿಜಯನ್ ಜನಪ್ರಿಯತೆ ಮತ್ತೆ ಅಧಿಕಾರ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

ಆದರೆ ರಾಹುಲ್ ಗಾಂಧಿ ಪಾಲಿಗೆ ಕೇರಳ ಇತರ ರಾಜ್ಯಗಳಿಗಿಂತಲೂ ಹೆಚ್ಚು ಪ್ರತಿಷ್ಠೆಯ ವಿಚಾರ. ಯಾಕೆಂದರೆ ರಾಹುಲ್ ಇಲ್ಲಿನ ವಯನಾಡ್ ಕ್ಷೇತ್ರದ ಸಂಸದ. ಹೀಗಾಗಿ ತಮ್ಮ ರಾಜ್ಯದಲ್ಲಿ ಗೆಲ್ಲುವುದು ಅವರಿಗೆ ಮಹತ್ವದ್ದಾಗಲಿದೆ. ಒಂದು ವೇಳೆ ಸೋತರೆ ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನೆ ಮೂಡಲಿದೆ. ಹೀಗಾಗಿ ಅವರು ಅವಿರತವಾಗಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ