ನವದೆಹಲಿ : ಗ್ಯಾಸ್ ವಿತರಣೆಯ ಹೊಸ ಯೋಜನೆಗಾಗಿ 7,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ.
ಮನೆ, ವಾಹನ ಹಾಗೂ ಸಣ್ಣ ಕೈಗಾರಿಕೆಗಳಿಗೆ ಗ್ಯಾಸ್ ಮಾರಾಟ ಮಾಡಲು 9 ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದೆ.
ಚಿಲ್ಲರೆ ವ್ಯಾಪಾರ, ಹೊಸ ಪ್ರದೇಶಗಳಿಗೆ ಪೈಪ್ ಲೈನ್ ಸೇರಿದಂತೆ ಹಲವು ಗ್ಯಾಸ್ ಮಾರಾಟ ಜಾಲಕ್ಕೆ ಮೂಲಸೌಕರ್ಯವನ್ನು ನಿರ್ಮಿಸಲು 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಗುರಿ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ವಿವಿಧ ರಾಜ್ಯಗಳ 61 ಪ್ರದೇಶಗಳಲ್ಲಿನ ಸಣ್ಣ ಕೈಗಾರಿಕೆಗಳು, ಮನೆ, ವಾಹನಗಳಿಗೆ ಅನಿಲ ಮಾರಾಟ ಮಾಡಲು 9 ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ಇಂಡಿಯನ್ ಆಯಿಲ್ ಕಂಪನಿ ತಿಳಿಸಿದೆ.