ಉಗ್ರರ ಕೈಗೆ ಸ್ಪೋಟಕ ತುಂಬಿದ ಡ್ರೋನ್ ಸಿಕ್ಕಿದ್ದು ಹೇಗೆ?

ಗುರುವಾರ, 1 ಜುಲೈ 2021 (09:00 IST)
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಮೇಲೆ ದಾಳಿ ನಡೆಸಲು ಪಾಕ್ ಪ್ರೇರಿತ ಉಗ್ರರು ಹೊಸ ತಂತ್ರ ಕಂಡುಕೊಂಡಿದ್ದಾರೆ.


ಪದೇ ಪದೇ ಡ್ರೋನ್ ಮೂಲಕ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಎದಿರೇಟು ನೀಡಿದೆ. ಆದರೆ ಉಗ್ರರಿಗೆ ಸ್ಪೋಟಕ ತುಂಬಿದ ಡ್ರೋನ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಪ್ರಶ್ನೆ ಶುರುವಾಗಿದೆ. ಈ ಬಗ್ಗೆ ಈಗಾಗಲೇ ಭಾರತ ವಿಶ್ವಸಂಸ್ಥೆ ಮುಂದೆ ಕಳವಳ ವ್ಯಕ್ತಪಡಿಸಿದೆ.

ಪಾಕಿಸ್ತಾನ ಮತ್ತು ಚೀನಾ ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತವೆ. ಈ ರಾಷ್ಟ್ರಗಳ ಕೈವಾಡವಿಲ್ಲದೇ ಉಗ್ರರ ಬಳಿ ಸುಧಾರಿತ ಆಯುಧಗಳು ಬರಲು ಸಾಧ‍್ಯವಿಲ್ಲ ಎಂಬುದು ಕೆಲವರ ಅಭಿಪ್ರಾಯ. ಹೀಗಾಗಿ ಭಾರತ ಕಠಿಣ ಡ್ರೋನ್ ನೀತಿ ಜಾರಿಗೆ ತರಲು ಮುಂದಾಗಿದೆ. ನಿನ್ನೆಯೂ ಮತ್ತೆ ಉಗ್ರರಿಂದ ಅಂತಹದ್ದೇ ಪ್ರಯತ್ನ ನಡೆದಿತ್ತು. ಗಡಿಯಾಚೆಯಿಂದ ಡ್ರೋನ್ ಬಂದು ತನ್ನ ಕಾರ್ಯಾಚರಣೆಯ ನಂತರ ವಾಪಸ್ ಹೋಗುತ್ತಿದೆ. ಇದೀಗ ಈ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ