ಹೆಂಡತಿ ಹುಡುಕಿಕೊಟ್ಟವರಿಗೆ 5000 ರೂ. ಬಹುಮಾನ ಘೋಷಿಸಿದ ಪತಿ
ಪಶ್ಚಿಮ ಬಂಗಾಲದ ವ್ಯಕ್ತಿಯೊಬ್ಬ ಹೈದರಾಬಾದ್ ನಲ್ಲಿ ನೌಕರಿ ಮಾಡುತ್ತಿದ್ದ. ಆತನ ಪತ್ನಿ, ಮಗ ಪ.ಬಂಗಾಲದಲ್ಲೇ ಇದ್ದಾರೆ. ಗಂಡ ದೂರವಿದ್ದಾಗ ಹೆಂಡತಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು.
ಪತಿ ಊರಿಗೆ ಬಂದಿದ್ದಾಗ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳವಾಗಿತ್ತು. ಬಳಿಕ ಹೆಂಡತಿ ಮತ್ತು ಮಗ ಕಿಟಿಕಿ ಮೂಲಕ ಹಾರಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಇಬ್ಬರನ್ನೂ ಹುಡುಕಿ ಸುಸ್ತಾದ ಗಂಡ ಈಗ ಬಹುಮಾನ ಘೋಷಣೆ ಮಾಡಿದ್ದಾನೆ.