ಹೆಂಡತಿಯನ್ನು ಮಾರಿ ಸ್ಮಾರ್ಟ್​ಫೋನ್ ಖರೀದಿಸಿದ ಪತಿ!

ಶನಿವಾರ, 23 ಅಕ್ಟೋಬರ್ 2021 (14:14 IST)
ಭುವನೇಶ್ವರ : ಆತ 17 ವರ್ಷಕ್ಕೇ ಮದುವೆಯಾಗಿದ್ದ. ಆತನಿಗಿಂತ 9 ವರ್ಷ ದೊಡ್ಡ ಹುಡುಗಿ ಆತನಿಗೆ ಹೆಂಡತಿಯಾಗಿಯೂ ಸಿಕ್ಕಿದ್ದಳು.
ಅಪ್ಪ-ಅಮ್ಮನ ಹಣದಿಂದ ಜೀವನ ಸಾಗಿಸುತ್ತಿದ್ದ ಅವನಿಗೆ ಜವಾಬ್ದಾರಿಗಳು ಏನೆಂದೇ ಗೊತ್ತಿರಲಿಲ್ಲ. ಆದರೆ, ಮದುವೆಯಾದ ಒಂದೇ ತಿಂಗಳಿಗೆ ಆತ ತನ್ನ ಹೆಂಡತಿಯನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಹೆಂಡತಿಯನ್ನು ಮಾರಿದ ಹಣದಿಂದ ಆತ ಸ್ಮಾರ್ಟ್​ಫೋನ್ ಖರೀದಿಸಿದ್ದಾನೆ!
ಒರಿಸ್ಸಾದಲ್ಲಿ ಇಂತಹ ವಿಚಿತ್ರ ಮತ್ತು ಅಮಾನವೀಯ ಘಟನೆಯೊಂದು ನಡೆದಿದೆ. ಒರಿಸ್ಸಾದ ಪೊಲೀಸರು ಆ ಮಹಿಳೆಯನ್ನು ಬಹಳ ಕಷ್ಟಪಟ್ಟು ರಕ್ಷಿಸಿದ್ದಾರೆ. ಒರಿಸ್ಸಾದ 17 ವರ್ಷದ ವ್ಯಕ್ತಿ 26 ವರ್ಷದ ತನ್ನ ಹೆಂಡತಿಯನ್ನು ರಾಜಸ್ಥಾನದ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ತಾನು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಇಟ್ಟಿಗೆ ಫ್ಯಾಕ್ಟರಿಯಲ್ಲಿದ್ದ ವ್ಯಕ್ತಿಗೆ ತನ್ನ ಹೆಂಡತಿಯನ್ನು ಮಾರಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ