ಹೆಂಡ್ತಿ ಕೊಂದು ಮೆಟ್ರೋ ಸ್ಟೇಷನ್‌ನಿಂದ ಹಾರಿ ಗಂಡ ಆತ್ಮಹತ್ಯೆ..!
ಹೆಂಡತಿಯನ್ನು ಕೊಂದು ಗಂಡನೋರ್ವ ಮೆಟ್ರೋ ನಿಲ್ದಾಣದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರ ದೆಹಲಿ ಸಮೀಪದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಗೌರವ್ ಶರ್ಮಾ ಎಂಬಾತ ಗುರುಗ್ರಾಮದಲ್ಲಿದ್ದ ತನ್ನ ಪತ್ನಿ ಲಕ್ಷ್ಮಿ ರಾವತ್ ಎಂಬಾಕೆಯನ್ನು ಕೊಂದಿದ್ದಾನೆ.ಬಳಿಕ ಪೊಲೀಸರ ಭಯ ಶುರುವಾಗಿದ್ದು,ಮಂಗಳವಾರ ಮುಂಜಾನೆ ಕೌಶಂಬಿ ಮೆಟ್ರೋ ನಿಲ್ದಾಣದಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.