ವರದಕ್ಷಿಣೆ ಕಿರುಕುಳ: ಪತ್ನಿ, ಮಗಳನ್ನು ಮನೆಯಿಂದ ಹೊರ ಹಾಕಿದ ಪತಿ
ರಾಜಸ್ಥಾನ್ ಮೂಲದ ವೈದ್ಯ 11 ವರ್ಷಗಳ ಹಿಂದೆ ಮದುವೆಯಾಗಿದ್ದ. ಈ ದಂಪತಿಗೆ ಈಗ 7 ವರ್ಷದ ಮಗುವೂ ಇದೆ. ಇತ್ತೀಚೆಗೆ ತನ್ನ ಹೆತ್ತವರ ಜೊತೆ ಸೇರಿಕೊಂಡು ಪತ್ನಿ-ಮಗಳಿಗೆ ಹಿಂಸಿಸುತ್ತಿದ್ದ. ಬಳಿಕ ಉನ್ನತ ವಿದ್ಯಾಭ‍್ಯಾಸಕ್ಕೆ ತಮಿಳುನಾಡಿಗೆ ಶಿಫ್ಟ್ ಆಗಿದ್ದ. ಈ ವೇಳೆ ಪತ್ನಿಯೂ ಜೊತೆಗಿದ್ದಳು. ಆದರೆ ಆತ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ.
ಇತ್ತೀಚೆಗೆ ಆಸ್ಪತ್ರೆ ಕಟ್ಟಿಸಲು 20 ಲಕ್ಷ ಹಣ ಬೇಕು ಎಂದು ಪತ್ನಿಗೆ ತವರಿನಿಂದ ಹಣ ತಂದುಕೊಡುವಂತೆ ಹಿಂಸಿಸಿದ್ದ. ತವರು ಮನೆಯವರು ಹಣ ಕೊಡಲು ಒಪ್ಪದೇ ಇದ್ದಾಗ ಪತ್ನಿ,ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ. ಇದೀಗ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.