ಮಹಿಳೆಯ ಮೇಲೆ ಪತಿಯ ಸ್ನೇಹಿತರಿಂದ ಮಾನಭಂಗ

ಬುಧವಾರ, 14 ಏಪ್ರಿಲ್ 2021 (10:05 IST)
ಬುಲಂದ್ ಶಹರ್ : ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡನ ಸ್ನೇಹಿತರಿಂದ ಸಾಮೂಹಿಕ ಮಾನಭಂಗಕ್ಕೊಳಗಾದ ಘಟನೆ ಬುಲಂದ್ ಶಹರ್ ಜಿಲ್ಲೆಯ ಅಹರ್ ಪ್ರದೇಶದಲ್ಲಿ ನಡೆದಿದೆ.

ಪತ್ನಿಯ ಜೊತೆ ಆಗಾಗ ಮನೆಗೆ ಮನೆಗೆ ಬರುತ್ತಿದ್ದ ಆತನ ಇಬ್ಬರು ಸ್ನೇಹಿತರು, ಒಮ್ಮೆ ಪತಿ ಇಲ್ಲದಿದ್ದಾಗ ಮನೆಗೆ ಬಂದು ಪತಿ ನೀಡಿದಾನೆಂದು ಮತ್ತು ಬರುವ ಮಾತ್ರೆ ಮಿಕ್ಸ್ ಮಾಡಿದ ತಂಪು ಪಾನೀಯವನ್ನು ನೀಡಿದ್ದಾರೆ. ಇದನ್ನು ಸೇವಿಸಿದ ಮಹಿಳೆ ಪ್ರಜ್ಞೆ ಕಳೆದುಕೊಂಡಾಗ ಆಕೆಯ ಮೇಲೆ ಮಾನಭಂಗ ಎಸಗಿದ್ದಾರೆ. ಈ ಬಗ್ಗೆ ಆಕೆ ಪತಿಗೆ ತಿಳಿಸಿದರೆ ಆತ ಆಕೆಯ ಮೇಲೆ ಹಲ್ಲೆ ಮಾಡಿ ಸ್ನೇಹಿತರ ಬಳಿ ಕರೆದೊಯ್ಯುತ್ತಿದ್ದ. ಅಲ್ಲದೇ ಆರೋಪಿಗಳಿಬ್ಬರು ಮಹಿಳೆಯ ಅಶ್ಲೀಲ ಫೋಟೊ ತೆಗೆದುಕೊಂಡು ಆ ಮೂಲಕ ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಮಾನಭಂಗ ಎಸಗುತ್ತಿದ್ದರು.

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ