ಒಪ್ಪಿಗೆಯಿಲ್ಲದೇ ಫೋನ್ ಖರೀದಿಸಿದ ಪತ್ನಿಯ ಕೊಲೆಗೆ ಸ್ಕೆಚ್ ಹಾಕಿದ!
ಪತ್ನಿ ತನ್ನ ಒಪ್ಪಿಗೆಯಿಲ್ಲದೇ ಫೋನ್ ಖರೀದಿಸಿದ್ದಕ್ಕೆ ಆಕೆಯ ಕೊಲೆಗೆ ಗೂಂಡಾಗಳನ್ನು ನೇಮಿಸಿದ್ದ. ಸುಪಾರಿ ಪಡೆದಿದ್ದ ಗೂಂಡಾಗಳು ಮಹಿಳೆಯ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ನೆರೆಹೊರೆಯವರ ಸಹಾಯದಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮಹಿಳೆ ಬದುಕುಳಿದಿದ್ದಾಳೆ.
ಇದೀಗ ಗಂಡನ ಮೇಲೆ ಮಹಿಳೆ ದೂರು ನೀಡಿದ್ದು, ಕೊಲೆ ಯತ್ನ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.