ಪತ್ನಿ ಓಡಿ ಹೋಗಿದ್ದಕ್ಕೆ ಮಕ್ಕಳನ್ನು ಕೊಂದು ಜೀವಕೊನೆಗಾಣಿಸಿದ ಪತಿ
ಸೋಮವಾರ, 2 ಆಗಸ್ಟ್ 2021 (11:34 IST)
ಚಂಢೀಘಡ: ಪತ್ನಿ ನೆರೆಮನೆಯ ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ಬೇಸತ್ತ ಪತಿ ಇಬ್ಬರು ಮಕ್ಕಳನ್ನು ಕೊಂದು ತಾನೂ ಜೀವಕೊನೆಗಾಣಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ.
ಪತ್ನಿ ನೆರೆಮನೆಯಾತನೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಳು. ಆಕೆಯ ಪ್ರಿಯಕರ ಪತಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಈ ಜಂಜಾಟಗಳಿಂದ ಬೇಸತ್ತ ವ್ಯಕ್ತಿ ತನ್ನ 3 ಮತ್ತು 9 ವರ್ಷದ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದೀಗ ಪೊಲೀಸರು ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.