ಹೆಂಡತಿಯ ಕೊಂದು ನಾಟಕವಾಡಿದ ಗಂಡ

ಮಂಗಳವಾರ, 1 ಮಾರ್ಚ್ 2022 (09:40 IST)
ಮುಂಬೈ: ಪತ್ನಿಯನ್ನು ಹೊಡೆದು ಕೊಂದ ಗಂಡ ಆಕೆ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

22 ವರ್ಷದ ಮಹಿಳೆ ಕೊಲೆಗೀಡಾದವಳು. ಈಕೆಗೆ ಪತಿ ಹೊಡದಿದ್ದ ಪರಿಣಾಮ ಆಕೆ ಸಾವನ್ನಪ್ಪಿದ್ದಳು. ಆದರೆ ಪತಿ ಆಕೆ ಮಹಡಿಯಿಂದ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ ಎಂದು ವೈದ್ಯರ ಎದುರು ನಾಟಕವಾಡಿದ್ದ. ಆದರೆ ಕೆಲವು ಸಮಯದಲ್ಲೇ ಆಕೆ ಸಾವನ್ನಪ್ಪಿದ್ದಳು. ಹೀಗಾಗಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಆಂತರಿಕ ಗಾಯಗಳಿಂದ ಸಾವನ್ನಪ್ಪಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಪತಿಯ ಮೇಲೆ ಅನುಮಾನಗೊಂಡು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸತ್ಯ ಬಯಲಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ