ಲಿಂಗ ಪರಿವರ್ತಿಸುತ್ತೇವೆಂದು ಪರಲೋಕಕ್ಕೆ ಕಳುಹಿಸಿದರು!
ಬಿ ಫಾರ್ಮ್ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ಶಸ್ತ್ರಚಿಕಿತ್ಸೆಗಾಗಿ 28 ವರ್ಷದ ಯುವಕನನ್ನು ಮುಂಬೈಗೆ ಕರೆದೊಯ್ದಿದ್ದರು. ಇಲ್ಲಿ ಲಾಡ್ಜ್ ಒಂದರಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು. ಶಸ್ತ್ರಚಿಕಿತ್ಸೆ ಮಾಡುವುದಾಗಿ ಯೂ ಟ್ಯೂಬ್ ನೋಡಿಕೊಂಡು ಪ್ರಯೋಗ ನಡೆಸಿದರು.
ಆದರೆ ಈ ಮಧ್ಯೆ ಎಡವಟ್ಟಾಗಿದ್ದು, ಯುವಕ ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.