ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಪಾಪಿ ಪತಿ
ನಿರುದ್ಯೋಗಿಯಾಗಿದ್ದ ಪತಿ ಮದ್ಯದ ದಾಸನಾಗಿದ್ದ. ಕುಡಿಯಲು ಹಣ ಕೊಡುವಂತೆ ಪತ್ನಿಯನ್ನು ಸದಾ ಪೀಡಿಸುತ್ತಿದ್ದ. ಆದರೆ ವೈವಾಹಿಕ ಸಂಬಂಧ ಮುರಿದುಕೊಳ್ಳಲು ಇಷ್ಟಪಡದ ಪತ್ನಿ ಆತನ ಎಲ್ಲಾ ಕಿರುಕುಳವನ್ನು ಸಹಿಸಿಕೊಳ್ಳುತ್ತಿದ್ದಳು.
ಆದರೆ ಈ ಬಾರಿ ಪತಿಯ ಕಿರುಕುಳ ಮಿತಿ ಮೀರಿದ್ದು, ಪತ್ನಿ ಸ್ನಾನಕ್ಕೆ ಹೋಗಿದ್ದಾಗ ಇಲೆಕ್ಟ್ರಿಕ್ ಶಾಕ್ ನೀಡಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ. ಇದೀಗ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು,ಆರೋಪಿಯನ್ನು ಬಂಧಿಸಲಾಗಿದೆ.