ಶರದ್ ಯಾದವ್ ಮೂರು ಅವಧಿಗೆ ಜೆಡಿಯು ಪಕ್ಷದ ಅಧ್ಯಕ್ಷರಾಗಿದ್ದರು. ನಂತರ ಪಕ್ಷದ ಕಾರ್ಯಕರ್ತರು ಆ ಹೊಣೆಯನ್ನು ನನಗದೆ ನೀಡಿದ್ದಾರೆ. ಆದರೆ, ಮಾಧ್ಯಮಗಳು ನನಗೆ ರಾಷ್ಟ್ರಮಟ್ಟದಲ್ಲಿ ಬೆಳೆಯುವ ಬಯಕೆಯಿದೆ ಎನ್ನುವಂತೆ ತೋರಿಸಿದವು. ಪಕ್ಷದ ಅಧ್ಯಕ್ಷನಾಗಿ ಜೆಡಿಯು ಪಕ್ಷವನ್ನು ಇತರ ರಾಜ್ಯಗಳಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತೇನೆ. ಆದರೆ, ಇದರರ್ಥ ನನಗೆ ಪ್ರಧಾನಿಯಾಗುವ ಕನಸಿದೆ ಎನ್ನುವುದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಮ್ಮಿಶ್ರ ಸರಕಾರದ ಪಾಲುದಾರ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಯಾದವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮಾತನಾಡಲು ನಿರಾಕರಿಸಿ, ಬಿಜೆಪಿ ಆರೋಪಗಳಿಗೆ ಲಾಲು ಪ್ರತಿಕ್ರಿಯೆ ನೀಡಬೇಕು.ನಾನು ಹೇಳುವುದು ಏನೂ ಇಲ್ಲ. ಯಾರ ಬಳಿಯಾದರೂ ಸಾಕ್ಷ್ಯಗಳಿದ್ದಲ್ಲಿ ಕೋರ್ಟ್‌ಗೆ ಹೋಗಲಿ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.