ಭಾರತೀಯ ವಾಯುಪಡೆಯ ಮಿಗ್‌ 23 ಕ್ಯಾಪ್ಟರ್‌ ಪತನ: ಪೈಲಟ್ ಸೇಫ್

ಗುರುವಾರ, 6 ಜುಲೈ 2017 (14:39 IST)
ಜೈಪುರ: ಇತ್ತೀಚೆಗೆ ಅರುಣಾಚಲ ಪ್ರದೇಶದ ಸಗಾಲಿಯಲ್ಲಿ ಭಾರತೀಯ ವಾಯುಪಡೆಗೆ ಸೇರಿದ ವಿಮಾನ ಪತನವಾಗಿರುವ ಘಟನೆ ಮಾಸುವ ಮುನ್ನವೇ  ಇಂದು ಅಂತದ್ದೇ ಮತ್ತೊಂದು ಘಟನೆ ರಾಜಸ್ಥಾನದ ಜೋಧ್ ಪುರ ಸಮೀಪದಲ್ಲಿ ಸಂಭವಿಸಿದೆ.
 
ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರ್ ತುರ್ತು ಲ್ಯಾಂಡಿಂಗ್‌ ವೇಳೆ ರಾಜಸ್ಥಾನದ ಬಾಲೆಸರ್ ನಲ್ಲಿ ಪತನಗೊಂಡಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಿಗ್‌ 23 ಕ್ಯಾಪ್ಟರ್‌ ಪತನಗೊಂಡಿದ್ದು ಪೈಲಟ್‌ ಮತ್ತು ತರಬೇತಿ ಪಡೆಯುತ್ತಿದ್ದ ಸಿಬಂದಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. 
 
ಇನ್ನು ಪತನವಾದ ಕ್ಯಾಪ್ಟರ್‌ ಹೊತ್ತಿ ಉರಿದಿದ್ದು ಸುಟ್ಟು ಭಸ್ಮವಾಗಿದೆ. 
 

ವೆಬ್ದುನಿಯಾವನ್ನು ಓದಿ