ಪ್ರಧಾನಿ ಮೋದಿಯಿಂದ ಮಾತ್ರ ಕಾಶ್ಮಿರ ಸಮಸ್ಯೆ ಪರಿಹಾರ ಸಾಧ್ಯ: ಮೆಹಬೂಬಾ

ಭಾನುವಾರ, 7 ಮೇ 2017 (13:19 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಮಾತ್ರ ಕಾಶ್ಮಿರ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯ ಎಂದು ಜಮ್ಮು ಕಾಶ್ಮಿರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. 
 
ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅಡಳಿತಾವಧಿಯಲ್ಲಿ ಹಿಂದಿನ ಎನ್‌ಡಿಎ ಸರಕಾರದ ನೀತಿಗಳನ್ನು ಯುಪಿಎ ಸರಕಾರ ಮುಂದುವರಿಸಿದ್ದರಿಂದ ಕಾಶ್ಮಿರ ಕಣಿವೆಯಲ್ಲಿ ಇಂತಹ ಉದ್ರಿಕ್ತ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   
 
ಬಿಜೆಪಿಯೊಂದಿಗೆ ಸಮ್ಮಿಶ್ರ ಸರಕಾರ ರಚಿಸಿರುವ ಪಿಡಿಪಿ ನಾಯಕಿ ಮುಫ್ತಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಹುಮತವಿದೆ. ಅವರು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ದೇಶದ ಜನತೆ ಬೆಂಬಲಿಸುತ್ತಾರೆ ಎಂದರು.
 
ಮೋದಿಯವರ ಪಾರದರ್ಶಕ ಕಾರ್ಯವೈಖರಿ, ಅಡಳಿತದಿಂದಾಗಿ ದೇಶದ ಜನತೆ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಅವರು ಮನಸ್ಸು ಮಾಡಿದಲ್ಲಿ ಕಾಶ್ಮಿರ ಸಮಸ್ಯೆಗೆ ಇತಿಶ್ರೀ ಹಾಡಬಹುದು ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ