ಕರೆಂಟ್ ಹೋದ ವೇಳೆ ಮನೆಗೆ ನುಗ್ಗಿದ ಮೂವರು ಯುವಕರು ಮಾಡಿದ್ದೇನು?

ಮಂಗಳವಾರ, 13 ಅಕ್ಟೋಬರ್ 2020 (09:35 IST)
ರಾಯ್ ಪುರ : ವಿದ್ಯುತ್ ಕಡಿತ ಉಂಟಾದ ವೇಳೆಯಲ್ಲಿ ಮೂವರು ಯುವಕರು  ಸೇರಿ ಮನೆಗೆ ನುಗ್ಗಿ18 ವರ್ಷದ ಹುಡುಗಿಯನ್ನು ಅಪಹರಿಸಿ ಮಾನಭಂಗ ಎಸಗಿದ ಘಟನೆ ಚತ್ತೀಸ್ ಗಢದ ರಾಯ್ ಪುರದಲ್ಲಿ ನಡೆದಿದೆ.  

ಸಂತ್ರಸ್ತೆ ರಾತ್ರಿ ಮನೆಯವರ ಜೊತೆ ಟಿವಿ ನೋಡುತ್ತಿದ್ದಾಗ ಅಚಾನಕ್ ಆಗಿ ಕರೆಂಟ್ ಹೋಗಿದೆ. ಆ ವೇಳೆ ಯಾರಿಗೂ ತಿಳಿಯದಂತೆ ಮನೆಗೆ ನುಗ್ಗಿದ ಮೂವರು ಯುವಕರು ಹುಡುಗಿಯನ್ನು ಅಪಹರಿಸಿ ನಿದ್ರೆ ಮಾತ್ರೆ ನೀಡಿ ಸಾಮೂಹಿಕವಾಗಿ ಮಾನಭಂಗ ಎಸಗಿದ್ದಾರೆ. ಇತ್ತ ಮನೆಯವರು ಹುಡುಗಿಯನ್ನು ಹುಡುಕಾಡಿದ್ದಾರೆ. ಆದರೆ ಮರುದಿನ ಹುಡುಗಿ ಹೊಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ತಕ್ಷಣ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಪ್ರಜ್ಞೆ ಬಂದ ಬಳಿಕ ಪೊಲೀಸರು ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮೂವರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಒಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ