ನಿಮ್ಮ ಬಳಿ ಈಗಲೂ 500 ಮತ್ತು 1000 ರೂ. ಹಳೇನೋಟುಗಳಿದ್ದರೆ ಇವತ್ತೇ ಬದಲಿಸಿಕೊಳ್ಳಿ

ಶುಕ್ರವಾರ, 31 ಮಾರ್ಚ್ 2017 (11:19 IST)
ನಿಮ್ಮ ಬಳಿ ಈಗಲೂ 500 ಮತ್ತು 1000 ರೂಪಾಯಿಯ ಹಳೇನೋಟುಗಳಿದ್ದರೆ ಇವತ್ತೇ ಆರ್`ಬಿಐ ಶಾಖಾ ಕಚೇರಿಗಳಿಗೆ ತೆರಳಿ ಬದಲಾಯಿಸಿಕೊಂಡು ಬಿಡಿ. ನಾಳೆಯಿಂದ ನಿಮ್ಮ ಬಳಿ 10 ಕ್ಕೂ ಅಧಿಕ ಹಳೇ ನೂಟು ಸಿಕ್ಕಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತೆ.

ನೋಟು ಬದಲಾವಣೆಗೆ ನೀಡಬೇಕು ಸ್ಪಷ್ಟ ಕಾರಣ: ಡಿಸೆಂಬರ್ 31ರವರೆಗೆ ವಿದೇಶದಲ್ಲಿದ್ದವರು ಮಾತ್ರ ನೋಟು ಬದಲಾವಣೆ ಮಾಡಿಸಿಕೊಳ್ಲಬಹುದಾಗಿದೆ. ವಿದೇಶದಲ್ಲಿದ್ದ  ಬಗ್ಗೆ ಸೂಕ್ತ ದಾಖಲೆ ಪತ್ರಗಳನ್ನ ನೀಡಿ ಹಣ ಬದಲಾವಣೆ ಮಾಡಿಕೊಳ್ಳಬಹುದು. ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ನಾಗ್ಪುರ ಆರ್`ಬಿಐ ಕೇಂದ್ರಗಳಲ್ಲಿ ಮಾತ್ರ ಹಣ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ನವೆಂಬರ್ 8ರಂದು ಪ್ರಧಾನಿ ಮೋದಿ ನೋಟು ಅಮಾನ್ಯಗೊಳಿಸಿದ ಬಳಿಕ ಹಳೇ ನೋಟು ಬದಲಾವಣೆಗೆ ಡಿಸೆಂಬರ್ 31ರವರೆಗೆ ಗಡುವು ವಿಧಿಸಲಾಗಿತ್ತು. ವಿದೇಶದಲ್ಲಿರುವವರಿಗೆ ಭಾರತಕ್ಕೆ ವಾಪಸ್ ಆಗಿ ಮಾರ್ಚ್ 31ರೊಳಗೆ ನೋಟು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ನಾಳೆಯಿಂದ ನಿಮ್ಮ ಬಳಿ 10 ಕ್ಕೂ ಅಧಿಕ ಹಳೇ ನೂಟು ಸಿಕ್ಕಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತೆ.

ವೆಬ್ದುನಿಯಾವನ್ನು ಓದಿ