ಇಲ್ಲಿ ಪ್ಲಾಸ್ಟಿಕ್​ ವಸ್ತುಗಳನ್ನು ತಂದುಕೊಟ್ಟರೆ ಸಿಗುತ್ತೆ ಊಟ, ಉಪಹಾರ

ಶನಿವಾರ, 27 ಜುಲೈ 2019 (12:02 IST)
ಛತ್ತೀಸ್ ಗಢ: ಮಣ್ಣಲ್ಲಿ ಕರಗದೆ ಪರಿಸರವನ್ನು ಹಾಳು ಮಾಡುತ್ತಿರುವ ವಸ್ತುವೆಂದರೆ ಅದು ಪ್ಲಾಸ್ಟಿಕ್. ಈ ಪ್ಲಾಸ್ಟಿಕ್ ನಿಂದ ಪರಿಸರವನ್ನು ಮುಕ್ತಗೊಳಿಸಲು ಛತ್ತೀಸ್ ​ಗಢದ ಅಂಬಿಕಾಪುರ ಮಹಾನಗರ ಪಾಲಿಕೆ ಸ್ವಚ್ಛ ಭಾರತ ಅಭಿಯಾನದಡಿ ಹೊಸದೊಂದು ಯೋಜನೆಯನ್ನು ರೂಪಿಸಿದೆ.




ಹೌದು. ಪ್ಲಾಸ್ಟಿಕ್​ ಮುಕ್ತ ಪರಿಸರ ನಿರ್ಮಾಣ ಮಾಡಲು ಸರ್ಕಾರ ಅನೇಕ ನಿಯಮಗಳನ್ನು ಜಾರಿಗೆ ತಂದರೂ ಪ್ಲಾಸ್ಟಿಕ್​ ಬಳಕೆ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಇದೀಗ ಬಳಕೆಯಾದ ಪ್ಲಾಸ್ಟಿಕ್ ನ್ನು ಸಂಗ್ರಹಿಸಲು ​ ಅಂಬಿಕಾಪುರ ಮಹಾನಗರ ಪಾಲಿಕೆ ಪ್ಲಾಸ್ಟಿಕ್​ ಚಿಂದಿ ಸಂಗ್ರಹಿಸುವ ನಿರಾಶ್ರತರಿಗೆ ದೇಶದಲ್ಲಿ ಮೊದಲ ಬಾರಿಗೆ  'ಗಾರ್ಬೇಜ್​ ಕೆಫೆ' ಎಂಬ ಹೋಟೆಲ್​ ನ್ನು ತೆರೆಯಲು ನಿರ್ಧರಿಸಿದೆ.


ಇಲ್ಲಿ ಕಸ ಸಂಗ್ರಹಿಸುವವರು ಒಂದು ಕೆ.ಜಿ. ಪ್ಲಾಸ್ಟಿಕ್​ ತಂದುಕೊಟ್ಟರೆ ಊಟ, ಅರ್ಧ ಕೆ.ಜಿ. ಪ್ಲಾಸ್ಟಿಕ್​ ತಂದುಕೊಟ್ಟರೆ ಉಪಾಹಾರ ನೀಡಲಾಗುತ್ತದೆ. ಇದರಿಂದ ಊಟಕ್ಕಾಗಿ ಪರದಾಡುವ ನಿರಾಶ್ರಿತರಿಗೆ ಅನುಕೂಲವಾಗುವುದರ ಜೊತೆಗೆ ಪ್ಲಾಸ್ಟಿಕ್​ ತ್ಯಾಜ್ಯ ಒಂದೆಡೆ ಸಂಗ್ರಹವಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ