ಮಸ್ಕತ್‌ನಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ

ಶುಕ್ರವಾರ, 19 ಮೇ 2023 (13:16 IST)
ಮುಂಬೈ : ಮಸ್ಕತ್ನಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 2.28 ಕೋಟಿ ರೂ. ಮೌಲ್ಯದ 4.2 ಕೆಜಿ ಚಿನ್ನದ ಧೂಳನ್ನು ವಶಪಡಿಸಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮಸ್ಕತ್ನಿಂದ ಆಗಮಿಸಿದ ಭಾರತೀಯ ಪ್ರಜೆಯೊಬ್ಬರು ಚಿನ್ನದ ಧೂಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಅದನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಚಿನ್ನದ ಧೂಳಿನ ಬೆಲೆ ಸುಮಾರು 2.28 ಕೋಟಿ ರೂ. ಗಳಾಗಿದ್ದು, ವ್ಯಕ್ತಿ ತನ್ನ ಜೀನ್ಸ್, ಒಳ ಉಡುಪು ಮತ್ತು ಮೊಣಕಾಲಿನ ಕ್ಯಾಪ್ಗಳ ಒಳಗೆ ಹೊಲಿದ ಪ್ಯಾಕೆಟ್ಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ