ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಭೀಕರ ಮರ್ಡರ್

ಗುರುವಾರ, 3 ನವೆಂಬರ್ 2016 (16:10 IST)
ಗುಜರಾತ್‌ನ ಜಾಮ್ ನಗರದಲ್ಲಿ ಇಂದು ಹಾಡಹಗಲೇ ಇಬ್ಬರು ಆರೋಪಿಗಳು ಯುವಕನೊಬ್ಬನನ್ನು ಚಾಕುವಿನಿಂದ ಭೀಕರವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.ಸಿಸಿಟಿವಿಯಲ್ಲಿ ಭೀಕರ ಕೃತ್ಯ ಸೆರೆಯಾಗಿದೆ.
 
27 ವರ್ಷ ವಯಸ್ಸಿನ ಯುವಕ ಅಬ್ಬಾಬಾಯಿ ಅಮಾಲಿ, ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಕುರಿತಂತೆ ವಾದ ವಾಗ್ವಾದ ವಿಕೋಪಕ್ಕೆ ತೆರಳಿದಾಗ ಆರೋಪಿಗಳಾದ ತಂದೆ ಮತ್ತು ಮಗ ಯುವಕನಿಗೆ ಹಲವು ಬಾರಿ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾರೆ.
 
ಯುವಕ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಮಧ್ಯೆ ಬಿದ್ದು ನರುಳಾಡಿದರೂ ಯಾರು ನೆರವಿಗೆ ಬರಲಿಲ್ಲ ಎನ್ನಲಾಗಿದೆ. ರಸ್ತೆಯ ಮೇಲೆ ಜನರು ಓಡಾಡುತ್ತಿದ್ದರೂ ಯುವಕನನ್ನು ರಕ್ಷಿಸಲಿಲ್ಲ ಎನ್ನಲಾಗಿದೆ.
 
ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ