ಅಕ್ರಮ ಲೈಂಗಿಕ ಸಂಬಂಧ: ಸಹೋದರಿಯನ್ನು ಗುಂಡಿಕ್ಕಿ ಕೊಂದ ಸಹೋದರ

ಶನಿವಾರ, 4 ನವೆಂಬರ್ 2023 (12:57 IST)
ಯುವತಿ ಅಕ್ರಮ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಸೋದರಸಂಬಂಧಿ ಆಕೆಯ ಜೊತೆ ವಾಗ್ವಾದಕ್ಕೀಳಿದಿದ್ದಾನೆ. ಆ ವೇಳೆ ಕೋಪಗೊಂಡ ಆತ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮ ಆಕೆ ಸ್ಥಳದಲ್ಲೆ ಸಾವನಪ್ಪಿದ್ದು, ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
 
ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು 19 ವರ್ಷದ ಯುವತಿಯನ್ನು ಆಕೆಯ ಸೋದರ ಸಂಬಂಧಿಯೊಬ್ಬ ಗುಂಡಿಕ್ಕಿ ಕೊಂದ ಘಟನೆ ಪಂಜಾಬ್ ನ ಪಟಿಯಾಲ ಜಿಲ್ಲೆಯ ಸನೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭಂಬುವಾನ್ ಗ್ರಾಮದಲ್ಲಿ ನಡೆದಿದೆ.
 
ಈ ಬಗ್ಗೆ ಯುವತಿಯ ತಾಯಿ ಪೊಲಿಸರಿಗೆ ದೂರು ನೀಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ