ದೆಹಲಿ ಸಿಎಂ ಕೇಜ್ರಿವಾಲ್ ಗೆ ಇಂದು ಅಗ್ನಿ ಪರೀಕ್ಷೆ

ಬುಧವಾರ, 26 ಏಪ್ರಿಲ್ 2017 (09:06 IST)
ನವದೆಹಲಿ: ದೆಹಲಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಪಲಿತಾಂಶ ಇಂದು ಹೊರಬೀಳಲಿದೆ. ಮತ ಎಣಿಕೆ ಪ್ರಾರಂಭವಾಗಿದ್ದು, ಬಿಜೆಪಿ ಮುನ್ನಡೆಯಲ್ಲಿದೆ.

 
ಬಿಜೆಪಿ ಆರಂಭದಿಂದಲೇ ಮುನ್ನಡೆ ಪಡೆದಿದ್ದು, ಕಾಂಗ್ರೆಸ್ ದ್ವಿತೀಯ ಸ್ಥಾನದಲ್ಲಿದೆ. ಎಎಪಿ ತೀರಾ ಹಿನ್ನಡೆಯಲ್ಲಿದೆ. ಇದು ಸಿಎಂ ಕೇಜ್ರಿವಾಲ್ ಗೆ ಸಂಕಷ್ಟ ತರಲಿದೆ.

ಈಗಾಗಲೇ ಚುನಾವಣಾ ಸಮೀಕ್ಷೆಯಲ್ಲಿ ಎಎಪಿ ಧೂಳೀಪಟವಾಗಲಿದ್ದು, ಬಿಜೆಪಿ ಬಹುಮತ ಸಾಧಿಸಲಿದೆ ಎಂದು ವರದಿಗಳು ಬಂದಿವೆ. ಅದೇ ಪ್ರಕಾರ ಬಿಜೆಪಿ ಮುನ್ನಡೆಯಲ್ಲಿದೆ. ಒಂದು ವೇಳೆ ಸಮೀಕ್ಷೆ ನಿಜವಾದರೆ, ಚಳವಳಿ ನಡೆಸುವುದಾಗಿ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.

ಮತ ಯಂತ್ರದ ನೆರವಿನಿಂದ ಬಿಜೆಪಿ ಗೆಲ್ಲುತ್ತಿದೆ. ಹಾಗಾಗಿ ಮತಯಂತ್ರ ನಿಷೇಧಿಸಬೇಕೆಂದು ಎಎಪಿ ಹಾಗೂ ಪ್ರಮುಖ ವಿಪಕ್ಷಗಳು ಒತ್ತಾಯಿಸುತ್ತಲೇ ಇವೆ. ಹೀಗಾಗಿ ಈ ಚುನಾವಣೆಯಲ್ಲಿ ಗೆದ್ದರೆ ಮತ್ತೆ ಆ ವಾದಕ್ಕೆ ಬಲ ಬರಬಹುದು. ಹಾಗಾಗಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮಹತ್ವದ್ದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ