ಬಂಜೆಯೆಂಬ ಕಾರಣಕ್ಕೆ ಸೊಸೆಗೇ ಗತಿಗಾಣಿಸಲು ಹೊರಟ ಅತ್ತೆ-ಮಾವ

ಸೋಮವಾರ, 21 ಸೆಪ್ಟಂಬರ್ 2020 (11:10 IST)
ಮೀರತ್: ಮದುವೆಯಾಗಿ 10 ವರ್ಷವಾದರೂ ಸೊಸೆ ಹಡೆಯಲಿಲ್ಲವೆಂದು ಅತ್ತೆ-ಮಾವ ಆಕೆಗೆ ಹೀನಾಯವಾಗಿ ಥಳಿಸಿದ್ದಲ್ಲದೆ, ವಿಷಪ್ರಾಷನ ಮಾಡಿಸಿ ಕೊನೆಗಾಣಿಸಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಮಹಿಳೆಗೆ ಮದುವೆಯಾಗಿ 10 ವರ್ಷಗಳಾಗಿತ್ತು. ಮಕ್ಕಳಾಗಲಿಲ್ಲವೆಂದು ಆಗಾಗ ಅತ್ತೆ ಮಾವ ಆಕೆಗೆ ಕಿರುಕುಳ ನೀಡುತ್ತಿದ್ದರು. ಆದರೆ ಈ ಬಾರಿ ಇದು ಎಲ್ಲೆ ಮೀರಿತ್ತು. ಈ ಸಂಬಂಧ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಿರುಕುಳಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ