ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು: ಸದ್ಗುರು
ಮಂಗಳವಾರ, 22 ಫೆಬ್ರವರಿ 2022 (09:55 IST)
ನವದೆಹಲಿ : ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು ಎಂದು ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಲೆಗಳಲ್ಲಿ ಡ್ರೆಸ್ ಕೋಡ್ನಲ್ಲಿ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನೀವು ಧರಿಸುವ ಹಿಜಬ್, ಬುರ್ಖಾ, ಸೀರೆ ಮತ್ತು ನೀವು ತಿನ್ನುವ ಖಿಚಡಿ ಅಥವಾ ಬಿರಿಯಾನಿ ಎಲ್ಲವೂ ಮಣ್ಣಿನಿಂದ ಬರುತ್ತದೆ. ಆದ್ದರಿಂದ ಮಣ್ಣಿಗೆ ಅದ್ಭುತವಾಗಿ ಒಂದುಗೂಡಿಸುವ ಶಕ್ತಿಯಿದೆ.
ನಮ್ಮನ್ನು ಒಟ್ಟಿಗೆ ಸೇರಿಸುವ ಜೀವನದ ಅಂಶಗಳನ್ನು ನೋಡುವ ಬದಲು, ನಾವು ನಿರಂತರವಾಗಿ ನಮ್ಮನ್ನು ವಿಭಜಿಸುವ ಅಂಶಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ.
ಹಿಂದಿನ ಪೀಳಿಗೆಯವರು ಬದುಕಿದ ಪೂರ್ವಾಗ್ರಹಗಳೊಂದಿಗೆ ಮಕ್ಕಳು ಬೆಳೆಸಬಾರದು. ನೀವು ಶಾಲೆಗಳಲ್ಲಿದ್ದಾಗ ನಿಮ್ಮನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಮಕ್ಕಳಿಗೆ ನೀವು ಹಿಜಬ್ ಹೆಸರಿನಲ್ಲಿ ಭಜನೆಯ ವಿಷವನ್ನು ತಿನ್ನಿಸಬಾರದು ಎಂದು ಹೇಳಿದ್ದಾರೆ.