ಮುಂಬೈ: ನಿನ್ನೆ ಮಧ್ಯರಾತ್ರಿಯಿಂದ ಸುರಿದ ಭಾರೀ ಮಳೆಗೆ ಮುಂಬೈನ ಹಲವು ಪ್ರದೇಶಗಳು ಜಲಾವೃತವಾಗಿ, ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರ ಮುಂಜಾನೆ ಭಾರಿ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ತೀವ್ರ ಜಲಾವೃತವಾಗಿದೆ.
ನಗರದಲ್ಲಿ ಕೇವಲ ಆರು ಗಂಟೆಗಳಲ್ಲಿ 300 ಮಿ.ಮೀ ಗಿಂತಲೂ ಹೆಚ್ಚು ಮಳೆಯಾಗಿದ್ದು, ಇದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ರೈಲು ಸಂಚಾರಕ್ಕೆ ತೊಂದರೆಯಾಗಿದೆ.
ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಪ್ರಕಾರ, ಮುಂಬೈನಲ್ಲಿ ಇಂದು ಮುಂಜಾನೆ 1 ರಿಂದ 7 ರವರೆಗೆ ಆರು ಗಂಟೆಗಳಲ್ಲಿ ವಿವಿಧ ಸ್ಥಳಗಳಲ್ಲಿ 300 ಮಿಮೀ ಮಳೆಯನ್ನು ದಾಖಲಿಸಿದೆ.
"ಕೆಲವು ತಗ್ಗು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಜಲಾವೃತ ಮತ್ತು ಉಪನಗರ ರೈಲು ಸೇವೆಗಳಿಗೆ ಅಡ್ಡಿಯುಂಟಾಯಿತು" ಎಂದು ಬಿಎಂಸಿ ಹೇಳಿದೆ.
ಇಂದು ಮತ್ತು ನಾಳೆ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಬಿಎಂಸಿ ಎಚ್ಚರಿಕೆ ನೀಡಿದೆ. ಈ ಮಧ್ಯೆ ಮುಂಬೈನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.