ಕಾಶ್ಮೀರದಲ್ಲಿ ಗೋ ರಕ್ಷಕ ದಳದ ದಾಳಿ: 9 ವರ್ಷದ ಹುಡುಗಿ ಸೇರಿ ಐವರಿಗೆ ಗಾಯ

ಶನಿವಾರ, 22 ಏಪ್ರಿಲ್ 2017 (11:17 IST)
ಸ್ವಯಂ ಘೋಷಿತ ಗೋರಕ್ಷಕದಳದಿಂದ ದಾಳಿಗೊಳಗಾಗಿ 9 ವರ್ಷದ ಮಗು ಸೇರಿ ಐವರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದಿದೆ.
 

ತಲ್ವಾರ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಲೆಮಾರಿ ಕುಟುಂಬದ ಮೇಲೆ ಏಕಾಏಕಿ ದಾಳಿ ನಡೆಸಿದ ಗೋರಕ್ಷಕದಳದ ಕಾರ್ಯಕರ್ತರು ಹಲ್ಲೆ ನಡೆಸಿ ಅವರ ಬಳಿ ಇದ್ದ ಹಸು, ಮೇಕೆ, ಕುರಿಗಳನ್ನ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು, ದಾಳಿ ನಡೆಸಿದ ಐವರನ್ನ ಗುರ್ತಿಸಲಾಗಿ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಗೋರಕ್ಷಕದಳದ ದಾಳಿಯಿಂದ ಇತ್ತೀಚೆಗೆ ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬ ಹತನಾದ ಬಳಿಕ ಗೋರಕ್ಷಕಕ ದಳವನ್ನ ನಿಷೇಧಬಾರದೇಕೆ..? ಎಂದು ವಿವರಣೆ ಕೇಳಿ ಸುಪ್ರೀಂಕೋರ್ಟ್ ಕರ್ನಾಟಕ ಸೇರಿ ದೇಶದ 5 ರಾಜ್ಯಗಳಿಗೆ ನೋಟಿಸ್ ನೀಡಿದ್ದನ್ನ ಇಲ್ಲಿ ಸ್ಮರಿಸಬಹುದು.

ವೆಬ್ದುನಿಯಾವನ್ನು ಓದಿ