ಗ್ರಾಹಕರಿಗೆ ತಲೆನೋವಾದ ಬೆಲೆ ಹೆಚ್ಚಳ

ಬುಧವಾರ, 1 ಡಿಸೆಂಬರ್ 2021 (08:04 IST)
ಇಂದು ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯ ಜನರಿಗೆ ಮತ್ತೊಂದು  ಶಾಕ್ ನೀಡಿವೆ.
19 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು 100 ರೂಪಾಯಿಗಳಷ್ಟು ಹೆಚ್ಚಿಸಿವೆ. ಇನ್ನು ಮುಂದೆ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಕೂಡ ಆಹಾರ, ಪಾನೀಯಗಳು ದುಬಾರಿಯಾಗಲಿವೆ.
ಈಗಿನ ಬೆಲೆ ಏರಿಕೆಯೊಂದಿಗೆ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2101 ರೂಪಾಯಿಗೆ ತಲುಪಿದೆ. ನವೆಂಬರ್ನಲ್ಲಿ ಇಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2000.50 ರೂ.ಇತ್ತು.
ಸದ್ಯದ ಸಮಾಧಾನವೆಂದರೆ ಗೃಹಬಳಕೆಯ ಅಂದರೆ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಆದರೆ 19 ಕೆಜಿ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ