ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ರೈತರು ಹೊಲದಲ್ಲಿದ್ದ ಟೊಮೆಟೊ ಕೊಯ್ಲು ಮಾಡಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಹೆಚ್ಚಳವಾಗಿದೆ. ಅಲ್ಲದೇ ಆಂಧ್ರಪ್ರದೇಶ, ತಮಿಳುನಾಡು ಮತ್ತು ನಾಸಿಕ್‌ನಿಂದಲೂ ರಾಜ್ಯದ ಮಾರುಕಟ್ಟೆಗೆ ಟೊಮೆಟೊ ಬಂದಿದೆ. ಇದರಿಂದಾಗಿ 100 ರ ಗಡಿ ದಾಟಿದ್ದ ಟೊಮೊಟೊ ದರ 50 ರೂ. ಕಡಿಮೆಗೆ ಕುಸಿದಿದೆ. ನಿರಂತರ ಮಳೆ ಇಂದಾಗಿ ಟೊಮೆಟೊ ಬೆಳೆಗೆ ತೀವ್ರ ಹಾನಿಯಾಗಿತ್ತು. ಇದರಿಂದಾಗಿ ಮಾರುಕಟ್ಟೆಗೆ ಬರುವ ಟೊಮೊಟೊ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿತ್ತು.