ಕರ್ನಾಟಕದ 5 ಸೇರಿ 37 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ: ಕೇಂದ್ರ!
ಬುಧವಾರ, 11 ಆಗಸ್ಟ್ 2021 (14:50 IST)
ನವದೆಹಲಿ(ಆ.11): ಕಳೆದ 2 ವಾರದಲ್ಲಿ ಕರ್ನಾಟಕದ 5 ಜಿಲ್ಲೆಗಳು ಸೇರಿ 37 ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಇದು ಕಳವಳಕಾರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.
ಕರ್ನಾಟಕದ ಆ 5 ಜಿಲ್ಲೆಗಲೆಂದರೆ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರ ಹಾಗೂ ಉಡುಪಿ. ಇದೇ ವೇಳೆ, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸೋಂಕು ಮರುಉತ್ಪತ್ತಿ (ಒಬ್ಬರಿಂದ ಇನ್ನೊಬ್ಬರಿಗೆ ಹರಡುವಿಕೆ- ಆರ್ ದರ) ಪ್ರಮಾಣ 1ಕ್ಕಿಂತ ಹೆಚ್ಚಿದೆ. ಇದೂ ಕೂಡ ಅಪಾಯಕಾರಿ ಎಂದಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ಅಧಿಕಾರಿಗಳು, ಕಳೆದ 7 ದಿನಗಳಿಂದ ಭಾರತದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಶೇ.51.51ರಷ್ಟುಕೇಸುಗಳು ಕೇರಳವೊಂದರಲ್ಲಿಯೇ ಪತ್ತೆಯಾಗುತ್ತಿವೆ ಎಂದಿದೆ.
ಕೇರಳದ 11 ಜಿಲ್ಲೆ, ತಮಿಳುನಾಡಿನ 7, ಕರ್ನಾಟಕದ 5 ಜಿಲ್ಲೆಗಳೂ ಸೇರಿ ದೇಶದ 9 ರಾಜ್ಯಗಳ 37 ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಪ್ರಮಾಣ ಏರುಗತಿಯಲ್ಲಿದೆ. 11 ರಾಜ್ಯಗಳ 44 ಜಿಲ್ಲೆಗಳಲ್ಲಿ ವಾರದ ಸೋಂಕು ಪ್ರಮಾಣ ಶೇ.10ಕ್ಕಿಂತ ಅಧಿಕವಿದೆ,
ಈ ನಡುವೆ ಮಹಾರಾಷ್ಟ್ರದಲ್ಲಿ 34 ಸೋಂಕಿತರೂ ಸೇರಿ ದೇಶದಲ್ಲಿ ಒಟ್ಟು 86 ಅಪಾಯಕಾರಿ ಡೆಲ್ಟಾಪ್ಲಸ್ ವೈರಸ್ ಮಾದರಿ ಪತ್ತೆಯಾಗಿವೆ ಎಂದು ಎಚ್ಚರಿಸಿದ್ದಾರೆ